ಆತ್ಮೀಯರೆ ನಾನು ನಿಮ್ಮ ಸಂತೋಷ ಸಹ ಶಿಕ್ಷಕರು ಸರಕಾರಿ ಪ್ರೌಢಶಾಲೆ ಬಸ್ತವಾಡ, ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳುತ್ತದ್ದೇನೆ. ಈ ಬ್ಲಾಗ್ ರಚನೆಯ ಉದ್ದೇಶ ವಿದ್ಯಾರ್ಥಿಗಳ ಪ್ರಗತಿ. 2020 ನೇ ಶೈಕ್ಷಣಿಕ ವರ್ಷವು ಶೈಕ್ಷಣಿಕ ರಂಗದಲ್ಲಿ ಒಂದು ದೊಡ್ಡ ಹೊಡೆತವಾಗಿದೆ. ವಿದ್ಯಾರ್ಥಿಗಳ ಕಲಿಕೆಯ ಮೇಲೆ ಅಪಾರ ಪರಿಣಾಮವನ್ನುಂಟು ಮಾಡಿದೆ. ಈ ನಿಟ್ಟಿನ್ಲಲಿ ವಿದ್ಯಾರ್ಥಿಗಳ ಹಿತಬಯಸುವ ಪ್ರತಿಯೊಬ್ಬ ಶಿಕ್ಷಕರು ವಿವಿಧ ಮಾಧ್ಯಮಗಳ ಮೂಲಕ ಮಕ್ಕಳ ಕಲಿಕೆಯ ಕಡೆಗೆ ಸಾಕಷ್ಟು ಗಮನಹರಿಸುತ್ತಿದ್ದು ಸ್ತುತ್ಯಾರ್ಹವಾಗಿದೆ. ಈ ಬ್ಲಾಗ್ ,ಮೂಲಕ ನಾನೂ ಕೂಡ ಮಕ್ಕಳ ಪ್ರಗತಿಯ ಬಗೆಗೆ ಕಾಳಜಿಯನ್ನಿಟ್ಟುಕೊಂಡು ನನಗೆ ತಿಳಿದ ಮಟ್ಟಿಗೆ ವಿದ್ಯಾರ್ಥಿಗಳ ಸಲುವಾಗಿ ಸಂಪನ್ನೂಲಗಳನ್ನು ತಯಾರಿಸುತ್ತಿದ್ದು ಈ ಸಂಪನ್ಮೂಲಗಳು ತಮಗೆ ಉಪಯೋಗವಾದರೆ ನನ್ನ ಶ್ರಮ ಸಾರರ್ಥಕವೆಂದು ಭಾವಿಸುತ್ತೇನೆ. ಧನ್ಯವಾದಗಳೊಂದಿಗೆ ತಮ್ಮ ಆತ್ಮೀಯ ಸಂತೋಷ್ ಎಸ್. ಬಿ.